ಜನರ ಹಸಿವು ತಣಿಸಲು ಬೆಂಗಳೂರು ಮೀಲ್ಸ್ : ಸಾಮಾನ್ಯ ಕನ್ನಡಿಗ ಪ್ರತಿಷ್ಠಾನದ ಯೋಜನೆ

ಸುಮಾರು 25 ಮಂದಿ ನಾಗರಿಕರು ಬೆಂಗಳೂರು ನಗರದ ಜನರ ಹಸಿವನ್ನು ತಣಿಸಲು ಮುಂದಾಗಿದ್ದಾರೆ. ಕೇರಳದ ಕೋಝಿಕ್ಕೋಡಿನಲ್ಲಿ ಚಳವಳಿಯಿಂದ ಸ್ಫೂರ್ತಿ ಪಡೆದು ಈ ಯೋಜನೆ ಸಿದ್ಧಪಡಿಸಲಾಗಿದ್ದು, ಬೆಂಗಳೂರು ಮೀಲ್ಸ್ ಎಂದು ಹೆಸರಿಡಲಾಗಿದ್ದು ಜನರು ಇಲ್ಲಿಂದ ಕೂಪನ್ ಖರೀದಿಸಿ ಯಾರಾದರು ಬಡವರಿಗೆ ಆ ಕೂಪನ್ ನ್ನು ನೀಡಬಹುದು. ಈ ಯೋಜನೆಯನ್ನು ಆಗಸ್ಟ್ 15ರಂದು ಆರಂಭಿಸಲಾಗುವುದು ಎಂದು ಬೆಂಗಳೂರು ಮೀಲ್ಸ್ ನ ಸಂಯೋಜಕ ಸಂದೀಪ್ ಪಾಶ್ವನಾಥ್ ತಿಳಿಸಿದ್ದಾರೆ. ಕಳೆದ ತಿಂಗಳಷ್ಟೇ ಅವರು ಆಪರೇಶನ್ ಸುಲೈಮಾನಿ ಆರಂಭಿಸಿದ್ದರು. ಸಾಮಾನ್ಯ ಕನ್ನಡಿಗ ಎಂದು ಗುಂಪನ್ನು[…]