ಜನರ ಹಸಿವು ತಣಿಸಲು ಬೆಂಗಳೂರು ಮೀಲ್ಸ್ : ಸಾಮಾನ್ಯ ಕನ್ನಡಿಗ ಪ್ರತಿಷ್ಠಾನದ ಯೋಜನೆ

bengaluru-meals

ಸುಮಾರು 25 ಮಂದಿ ನಾಗರಿಕರು ಬೆಂಗಳೂರು ನಗರದ ಜನರ ಹಸಿವನ್ನು ತಣಿಸಲು ಮುಂದಾಗಿದ್ದಾರೆ. ಕೇರಳದ ಕೋಝಿಕ್ಕೋಡಿನಲ್ಲಿ ಚಳವಳಿಯಿಂದ ಸ್ಫೂರ್ತಿ ಪಡೆದು ಈ ಯೋಜನೆ ಸಿದ್ಧಪಡಿಸಲಾಗಿದ್ದು, ಬೆಂಗಳೂರು ಮೀಲ್ಸ್ ಎಂದು ಹೆಸರಿಡಲಾಗಿದ್ದು ಜನರು ಇಲ್ಲಿಂದ ಕೂಪನ್ ಖರೀದಿಸಿ ಯಾರಾದರು ಬಡವರಿಗೆ ಆ ಕೂಪನ್ ನ್ನು ನೀಡಬಹುದು.

ಈ ಯೋಜನೆಯನ್ನು ಆಗಸ್ಟ್ 15ರಂದು ಆರಂಭಿಸಲಾಗುವುದು ಎಂದು ಬೆಂಗಳೂರು ಮೀಲ್ಸ್ ನ ಸಂಯೋಜಕ ಸಂದೀಪ್ ಪಾಶ್ವನಾಥ್ ತಿಳಿಸಿದ್ದಾರೆ. ಕಳೆದ ತಿಂಗಳಷ್ಟೇ ಅವರು ಆಪರೇಶನ್ ಸುಲೈಮಾನಿ ಆರಂಭಿಸಿದ್ದರು.

ಸಾಮಾನ್ಯ ಕನ್ನಡಿಗ ಎಂದು ಗುಂಪನ್ನು ರಚಿಸಲಾಗಿದ್ದು, ಆ ಗುಂಪಿನ ಸದಸ್ಯರು ಬೆಂಗಳೂರು ಮೀಲ್ಸ್ ನ್ನು ಆರಂಭಿಸುತ್ತಿದ್ದಾರೆ. ಕೋಝಿಕ್ಕೋಡ್ ಜಿಲ್ಲಾಧಿಕಾರಿ ಪ್ರಶಾಂತ್ ನಾಯರ್ ಕಳೆದ ಆರು ತಿಂಗಳ ಹಿಂದೆ ಅಧಿಕಾರ ಸ್ವೀಕರಿಸಿದ್ದರು. ಅವರಿಂದ ಪ್ರೇರಿತಗೊಂಡು ಕನ್ನಡಿಗರು ಈ ಗುಂಪನ್ನು ಹುಟ್ಟುಹಾಕಿದ್ದಾರೆ. ನಾವು ಐಎಎಸ್ ಅಧಿಕಾರಿ ಮಣಿವಣ್ಣನ್ ಅವರನ್ನು ಫೇಸ್ ಬುಕ್ ನಲ್ಲಿ ಫಾಲೋ ಮಾಡುತ್ತೇವೆ ಎನ್ನುತ್ತಾರೆ ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಸಂದೀಪ್.

ಸಿಂಗಾಪುರದಲ್ಲಿ ಫುಡ್ ಆನ್ ದ ವಾಲ್ ಎಂಬ ಚಳವಳಿ ನಡೆಯುತ್ತಿದೆ. ಅದೇ ಮಾದರಿಯ ಯೋಜನೆಯಿದು. ಗೋಡೆಯ ಮೇಲೆ ಹಣ ಪಾವತಿಸಿದ ಸ್ಟಿಕ್ಕರ್ ಇರುತ್ತದೆ. ಅಲ್ಲಿ ಹೋಗಿ ಅಗತ್ಯವಿರುವವರು ಸ್ಟಿಕ್ಕರ್ ತೆಗೆದುಕೊಂಡು ತಮಗೆ ಬೇಕಾದ ಆಹಾರವನ್ನು ತಿಂದು ಬರಬಹುದು.

ಸಾಮಾನ್ಯ ಕನ್ನಡಿಗ ಗುಂಪು ಆರಂಭದಲ್ಲಿ ಬೆಂಗಳೂರು ನಗರದ ಒಂದು ಕ್ಷೇತ್ರದಲ್ಲಿ ಆರಂಭಿಸಿ ನಂತರ ಉಳಿದ ಕಡೆಗಳಿಗೆ ವಿಸ್ತರಿಸಲಿದೆ.ಸಾಮಾನ್ಯ ಕನ್ನಡಿಗ ವೇದಿಕೆ ಈ ಸಂಬಂಧ ವೋಟಿಂಗ್ ಇಟ್ಟುಕೊಂಡಿತ್ತು. ಅದರಲ್ಲಿ ರಾಜಾಜಿನಗರ ಮೊದಲ ಸ್ಥಾನ ಬಂದಿತ್ತು.

ಇದೊಂದು ಹಸಿವನ್ನು ಹೋಗಲಾಡಿಸುವ ಕಾರ್ಯಕ್ರಮ. ನಗರದ ಜನತೆ ಅವರ ಆಹಾರ ತಿನ್ನುವ ಹಕ್ಕನ್ನು ಗೌರವಯುತವಾಗಿ ಹೊಂದಬೇಕೆಂಬುದು ಇದರ ಉದ್ದೇಶ ಎನ್ನುತ್ತಾರೆ ನಾಯರ್.

ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಫೇಸ್ ಬುಕ್ ನಲ್ಲಿ ಸಾಮಾನ್ಯ ಕನ್ನಡಿಗ ಎಂಬ ಗುಂಪನ್ನು ಸಂಪರ್ಕಿಸಬಹುದು.

Leave a Reply

Your email address will not be published. Required fields are marked *